Monday, December 10, 2018

ಖ್ಯಾತ ಪತ್ರಕರ್ತರಾದ ಶ್ರೀ ಪಿ.ಸಾಯಿನಾಥ್ ಅವರೊಡನೆ... With noted Journalist SrI P. Sainath...

ರಾಷ್ಟ್ರದ ಹೆಸರಾಂತ ಪತ್ರಕರ್ತರಾದ ಹಾಗೂ ರಾಷ್ಟ್ರಾದ್ಯಂತ ಗಮನಸೆಳೆದ "Everybody Loves Draught" ಕೃತಿಯ ಕರ್ತೃ ಶ್ರೀ ಪಿ.ಸಾಯಿನಾಥ್ ಅವರನ್ನು ನೋಡುವ ಹಾಗೂ ಅವರ ಚಿಂತನಾರ್ಹ ಮಾತುಗಳನ್ನು ಆಲಿಸುವ ಸುಸಂದರ್ಭ ಇಂದು (08-12-2018, ಶನಿವಾರ) ನನಗೆ ತುಮಕೂರಿನಲ್ಲೇ ಒದಗಿಬಂತು. ಅಂದಹಾಗೆ ಇವರು ಭಾರತದ ಮಾಜಿ ರಾಷ್ಟ್ರಪತಿ ದಿ.ಶ್ರೀ ವಿ.ವಿ.ಗಿರಿ ಅವರ ಮೊಮ್ಮಗ.


ತುಮಕೂರಿನ ಹನುಮಂತರಪುರದಲ್ಲಿನ ಪೇಟೆ ಶ್ರೀ ಕೊಲ್ಲಾಪುರದಮ್ಮ ದೇವಾಲಯದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ರಾಜ್ಯದ ಉಪಮುಖ್ಯಮಂತ್ರಿ ಸನ್ಮಾನ್ಯ ಡಾ. ಜಿ. ಪರಮೇಶ್ವರ್ ಅವರೊಂದಿಗೆ With Dr. G. Parameshwar at Kollapuradamma Temple, Hanumanthapura, Tumakuru

ತುಮಕೂರಿನ ಹನುಮಂತಪುರದಲ್ಲಿರುವ ಶ್ರೀ ಪೇಟೆ ಕೋಲ್ಲಾಪುರದಮ್ಮ ದೇವಾಲಯದಲ್ಲಿ ಇಂದು (07-12-2018, ಶುಕ್ರವಾರ) ಸಂಜೆ ಅಗ್ನಿಕುಲ ತಿಗಳ ಜನಾಂಗದ ವತಿಯಿಂದ ಏರ್ಪಟ್ಟಿದ್ದ ಬೃಹತ್ “ಲಕ್ಷ ದೀಪೋತ್ಸವ”ದ ಸುಸಂದರ್ಭದಲ್ಲಿ ತಿಗಳ ಜನಾಂಗದ ಮುಖಂಡರಾದ ಶ್ರೀ ಎನ್.ಎಸ್.ಶಿವಣ್ಣ, ಮಾಜಿ ಕಾರ್ಪೊರೇಟರ್ ಗಳಾದ ಶ್ರೀ ಪ್ರೆಸ್ ರಾಜಣ್ಣ ಮತ್ತು ಶ್ರೀ ರಾಮಕೃಷ್ಣ ಅವರು ನನ್ನನ್ನು ಪ್ರೀತಿಯಿಂದ ಗೌರವಿಸಿದರು. ಈ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಒಂದು ಚಿತ್ರ.....